ಮುಖ ಬೆಳ್ಳಗಾಗಲು, ಒಳ್ಳೇ ಕಲರ್ ಬರಲು ಮನೆಯಲ್ಲೇ ಇದೆ ಸುಲಭ ಮನೆಮದ್ದು

Health Tips

ಹಿಂದಿನ ಕಾಲದಿಂದಲೂ ಸಹ ಚರ್ಮದ ಹೊಳಪನ್ನು ವೃದ್ಧಿಸಿಕೊಳ್ಳುವುದಕ್ಕಾಗಿ ಹಲವಾರು ನೈಸರ್ಗಿಕ ಪದಾರ್ಥಗಳನ್ನು ಬಳಕೆ ಮಾಡುವ ಮೂಲಕ ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಗಮನಿಸಿದರೆ, ಹೆಣ್ಣುಮಕ್ಕಳು ಇಂತಹ ನೈಸರ್ಗಿಕ ಪದಾರ್ಥಗಳ ಬಳಕೆ ಕಡಿಮೆ ಮಾಡಿದ್ದಾರೆ. ಪಾರ್ಲರ್ ಮೊರೆ ಹೋಗಿ ತಮ್ಮ ತ್ವಚೆಯ ಅಂದವನ್ನು ಹಾಳು ಮಾಡಿಕೊಂಡಿದ್ದಾರೆ. ಆದರೆ ಇದೆಲ್ಲವೂ ಕ್ಷಣಿಕ ಹೊಳಪನ್ನು ನೀಡುತ್ತದೆ, ಹೊರತು ಚರ್ಮಕ್ಕೆ ಯಾವುದೆ ನೈಸರ್ಗಿಕ ಕಾಂತಿಯನ್ನು ನೀಡುವುದಿಲ್ಲ. ಇವತ್ತಿನ ಮಾಹಿತಿಯಲ್ಲಿ ಆಯುರ್ವೇದ ತಜ್ಞರು ತಿಳಿಸುವ ಕೆಲ ಮನೆಮದ್ದುಗಳನ್ನು ತಿಳಿಸಿಕೊಡುತ್ತೇವೆ. ಇವುಗಳನ್ನು ಬಳಕೆ ಮಾಡಿದರೆ ನೀವು ಅಂದುಕೊಂಡಂತಹ ಚರ್ಮದ ಹೊಳಪನ್ನು ಮನೆಯಲ್ಲಿಯೆ ಪಡೆದುಕೊಳ್ಳಬಹುದು ಜೊತೆಗೆ ಚರ್ಮದ ಆರೋಗ್ಯವೂ ನೈಸರ್ಗಿಕವಾಗಿ ವೃದ್ಧಿಸುತ್ತದೆ.

ಆಸಿಡಿಟಿಯಿಂದ ಹಿಡಿದು ಸಕ್ಕರೆ ಕಾಯಿಲೆ ತನಕ ನಿಮ್ಮ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗೆ ಸಂಪರ್ಕಿಸಿ: ನಿಸರ್ಗ ಮನೆ ಶಿರಸಿ 9448729434, 9731460353

ಆಯುರ್ವೇದ ಚರ್ಮತಜ್ಞರು ತಿಳಿಸಿರುವ ಪ್ರಕಾರ ಚರ್ಮದ ಕಾಂತಿ ನೈಸರ್ಗಿಕವಾಗಿ ವೃದ್ಧಿಯಾಗಬೇಕೆಂದರೆ ನಮ್ಮ ಆಹಾರ ಪದ್ಧತಿ ಬದಲಾಗಬೇಕು. ಹೌದು ತಜ್ಞರು ತಿಳಿಸುವುದೇನೆಂದರೆ, ಪ್ರತಿದಿನ 4 ಲೀಟರ್ ನೀರು ಹಾಗೆ ಆ್ಯಂಟಿ ಆಕ್ಸಿಡೆಂಟ್ಸ್ ಅಧಿಕವಾಗಿರುವ ತರಕಾರಿ ಹಣ್ಣುಗಳನ್ನು ಸೇವಿಸತಕ್ಕದ್ದು ಎಂದು ತಿಳಿಸಿದ್ದಾರೆ. ಯಾಕೆಂದರೆ ಈ ತರಕಾರಿ ಹಣ್ಣುಗಳಲ್ಲಿ ಇರುವಂತಹ ಒಮೆಗಾ 3 ಲೈಕೋಪಿನ್ ಪೋಷಕಾಂಶಗಳು ಚರ್ಮ ಹೊಳಪಾಗಲು ಕಾರಣವಾಗುತ್ತದೆ ಮತ್ತು ನೈಸರ್ಗಿಕವಾಗಿ ಚರ್ಮದ ಆರೋಗ್ಯವನ್ನು ವೃದ್ಧಿಸುತ್ತದೆ. ಅಷ್ಟೇ ಅಲ್ಲ ಮುಪ್ಪನ್ನು ಮುಂದೂಡುತ್ತದೆ.

ಮನೆಯಲ್ಲಿ ಮಾಡಬಹುದಾದ ಕೆಲವೊಂದು ಮನೆಮದ್ದುಗಳನ್ನು ಕೂಡ ತಿಳಿಸಿದ್ದಾರೆ. ಇವುಗಳಲ್ಲಿ ನಿಮ್ಮ ತ್ವಚೆಗೆ ಸೂಕ್ತವೆನಿಸುವ ಮನೆಮದ್ದುಗಳನ್ನು ಪಾಲಿಸಿ ಮೊದಲನೆಯದಾಗಿ ಕಿತ್ತಳೆ ಹಣ್ಣಿನ ರಸವನ್ನು ಮಿಶ್ರಮಾಡಿ, ಓಟ್ಸ್ ಪುಡಿಯೊಂದಿಗೆ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಲೇಪಿಸಿ ಇದರಿಂದ ಚರ್ಮ ಹೊಳಪಾಗುತ್ತದೆ. ಮತ್ತೊಂದು ಫೇಸ್ ಪ್ಯಾಕ್ ಅಂದರೆ ಹುತ್ತದ ಮಣ್ಣಿನೊಂದಿಗೆ ಮುಲ್ತಾನಿ ಮಿಟ್ಟಿ ಬೆರೆಸಿ ಇದಕ್ಕೆ ಹಾಲು ಮಿಶ್ರಣ ಮಾಡಿ ಪ್ಯಾಕ್ ಹಾಕಿಕೊಳ್ಳುವುದರಿಂದ ಮೊಡವೆ ಕಲೆಗಳು ದೂರವಾಗುತ್ತದೆ. ಬಾಳೆಹಣ್ಣಿನ ಪೇಸ್ಟ್ ಮತ್ತು ಪಪ್ಪಾಯ ಹಣ್ಣಿನ ಪೇಸ್ಟನ್ನು ಮಿಶ್ರಮಾಡಿ ಮುಖಕ್ಕೆ ಲೇಪನ ಮಾಡುವುದರಿಂದ ಕೂಡ ಕಾಂತಿ ಹೆಚ್ಚುತ್ತದೆ.

ಮತ್ತೊಂದು ಪ್ಯಾಕ್ ಇದು ಚರ್ಮಕ್ಕೆ ನೈಸರ್ಗಿಕ ಕಾಂತಿಯನ್ನು ನೀಡುತ್ತದೆ. ಕ್ಯಾರೆಟ್ ಪೇಸ್ಟ್ ನೊಂದಿಗೆ ಅಲೋವೆರಾ ಜ್ಯೂಸ್ ಬಾಳೆಹಣ್ಣಿನ ಪೇಸ್ಟ್ ಮುಲ್ತಾನಿ ಮಿಟ್ಟಿ ಮತ್ತು ಟೊಮೆಟೊ ಹಣ್ಣಿನ ರಸವನ್ನು ಮಿಶ್ರ ಮಾಡಿ ವಾರಕ್ಕೊಮ್ಮೆ ಮುಖಕ್ಕೆ ಲೇಪ. ಮಾಡಿ ಇದು ಕೂಡ ತ್ವಚೆಯನ್ನು ಮೃದುವಾಗಿಸಲು ಸಹಾಯ ಮಾಡುತ್ತದೆ. ತ್ವಚೆ ಡಲ್ ಆಗಿದೆ ಅನ್ನುವವರು ಕಡಲೆಹಿಟ್ಟು ಹೆಸರು ಕಾಳಿನ ಹಿಟ್ಟು ಮತ್ತು ಅರಿಶಿಣ ಜೊತೆಗೆ ಮೊಸರು ಮಿಶ್ರಮಾಡಿ ಪೇಸ್ಟ್ ಮಾಡಿಕೊಂಡು ತ್ವಚೆಗೆ ಲೇಪ ಮಾಡುತ್ತಾ ಬನ್ನಿ ಇದರಿಂದ ತ್ವಚೆಗೆ ಇನ್ಸ್ಟಂಟ್ ಹೊಳಪು ಬರುತ್ತದೆ. ಇವುಗಳಲ್ಲಿ ಯಾವ ಮನೆಮದ್ದು ನಿಮ್ಮ ತ್ವಚೆಗೆ ಸೂಕ್ತವಾಗುತ್ತದೆ ಅದನ್ನ ಬಳಸಿ ಸರಳ ಪರಿಹಾರಗಳಿಂದ ಪರಿಣಾಮಕಾರಿಯಾದ ಫಲಿತಾಂಶವನ್ನು ಪಡೆದುಕೊಳ್ಳಿ.

ಆಸಿಡಿಟಿಯಿಂದ ಹಿಡಿದು ಸಕ್ಕರೆ ಕಾಯಿಲೆ ತನಕ ನಿಮ್ಮ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗೆ ಸಂಪರ್ಕಿಸಿ: ನಿಸರ್ಗ ಮನೆ ಶಿರಸಿ 9448729434, 9731460353

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ

 

Leave a Reply

Your email address will not be published. Required fields are marked *